Connect with us

Hi, what are you looking for?

Diksoochi News

ಸಿನಿಮಾ

ನಟ ಕಿರಣ್ ರಾಜ್ ಗೆ ಹುಟ್ಟುಹಬ್ಬದ ಸಂಭ್ರಮ; `ಬಹದ್ದೂರ್ ಗಂಡು’ ಟೀಸರ್ ರಿಲೀಸ್

0

ಚಂದನವನ : ಕನ್ನಡತಿ ಧಾರಾವಾಹಿ ಹಾಗೂ ಕಿರಣ್ ರಾಜ್ ಫೌಂಡೇಶನ್ ಮೂಲಕ ಸಾಮಾಜಿಕ ಕಳಕಳಿ ಮೆರೆದು ಎಲ್ಲರ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಇಂದು ಅವರ ನಟನೆಯ ಬಹದ್ದೂರ್ ಗಂಡು' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಡಾ.ರಾಜ್ ಕುಮಾರ್ ಅಭಿನಯದ, 1976ರಲ್ಲಿ ತೆರೆ ಕಂಡಿದ್ದ `ಬಹದ್ದೂರ್ ಗಂಡು’ ಹಿಟ್ ಚಿತ್ರ. ಹಾಗಾಗಿ ಸಹಜವೆಂಬಂತೆ ಈ ಸಿನಿಮಾ ಶೀರ್ಷಿಕೆ ಮೂಲಕಾನೇ ಗಮನ ಸೆಳೆಯುತ್ತಿದೆ. ಇನ್ನು ಟೀಸರ್ ನಲ್ಲಿ ಮಾಸ್ ಎಲಿಮೆಂಟ್ಸ್ ಇದ್ದು, ಕಿರಣ್ ರಾಜ್ ಫ್ಯಾನ್ಸ್ ತುಂಬಾನೆ ಖುಷಿ ಪಟ್ಟಿದ್ದಾರೆ. ಬಾಡಿಬಿಲ್ಡ್ ಮಾಡಿ ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ ಕಿರಣ್ ರಾಜ್.
ಪ್ರಸಿದ್ಧ್ ಚಿತ್ರವನ್ನು ನಿರ್ದೇಶಿಸಿದ್ದು, ಯಶಾ ಶಿವಕುಮಾರ್ ಹಾಗೂ ನಿಸರ್ಗ ಲಕ್ಷ್ಮಣ್ ಇಬ್ಬರು ನಾಯಕಿಯರು. ಸ್ಪ್ಲಿಟ್ ಪರ್ಸನಾಲಿಟಿ ಸಿಂಡ್ರೋಮ್ ಇರುವ ಹುಡುಗಿಯಾಗಿ ಯಶಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರಿಸುಬ್ಬು, ನಾಗೇಶ್, ಗೋವಿಂದೇಗೌಡ, ರಮೇಶ್ ಭಟ್ ಮೊದಲಾದವರು ಪಾತ್ರವಾಗಿದ್ದಾರೆ. ಹಳ್ಳಿಯ ಸೊಗಡಿನ ಈ ಚಿತ್ರಕ್ಕೆ ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!