Connect with us

Hi, what are you looking for?

Diksoochi News

ಸಿನಿಮಾ

ನಿರ್ದೇಶಕ ಪವನ್ ಕುಮಾರ್ ಅವರಿಂದ ಬಿಗ್ ಅನೌನ್ಸ್ಮೆಂಟ್ ಬಗ್ಗೆ ಪ್ರಕಟಣೆ

0

ಚಂದನವನ : ಪವನ್ ಕುಮಾರ್ ನಿರ್ದೇಶನದ ಹೊಸ ಚಿತ್ರ ದ್ವಿತ್ವದ ಪೋಸ್ಟರ್ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಇದರೊಂದಿಗೆ ಮತ್ತೆ ಅವರು ಬಿಗ್ ಅನೌನ್ಸ್ಮೆಂಟ್ ಬಗ್ಗೆ ಹೇಳಿ ಕುತೂಹಲ ಕೆರಳಿಸಿದ್ದಾರೆ.

ಜುಲೈ 8 ರಂದು ತಮ್ಮ ಫೇಸ್ ಬುಕ್ ನಲ್ಲಿ ನಮ್ಮ ಕಡೆ ಇಂದ ದೊಡ್ಡ ಪ್ರಕಟಣೆ ಇದೆ ಎಂದು ಪೋಸ್ಟ್ ಹಾಕಿದ್ದಾರೆ. ಆದರೆ ಇದು ಯಾವ ವಿಷಯದ ಕುರಿತು ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು
ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು ಚಿತ್ರದ ನಾಯಕಿ ಅಥವಾ ಬೇರೆ ಕಲಾವಿದರ ಎಂಟ್ರಿ ಇರಬಹುದೇ ಎಂಬ ಪ್ರಶ್ನೆ ಎದ್ದಿದೆ.

ಆದರೆ ಇದು ಹೊಂಬಾಳೆ ಸಂಸ್ಥೆ ಇಂದ ಮೂಡಿಬರುತ್ತಿರುವ ದ್ವಿತ್ವ ಸಿನಿಮಾಗೆ ಸಂಬಂಧಿಸಿದ್ದಲ್ಲ ಎಂಬುದು ಪೋಸ್ಟರ್ ನಲ್ಲೇ ತಿಳಿಯುತ್ತದೆ. ಯಾಕೇಂದರೆ ಪೋಸ್ಟರ್ ನಲ್ಲಿ ಪವನ್ ಕುಮಾರ್ ಅವರ ಪಿಕೆ ಸ್ಟುಡಿಯೋಸ್ ಉಲ್ಲೇಖವಿದೆ.

Advertisement. Scroll to continue reading.

ಈಗಾಗಲೇ ತೆಲುಗಿನಲ್ಲಿ ವೆಬ್ ಸೀರಿಸ್ ಮಾಡಿದ್ದ ಪವನ್ ಕುಮಾರ್ ಕನ್ನಡದಲ್ಲಿ ವೆಬ್ ಸೀರಿಸ್ ಮಾಡಬಹುದು ಎಂಬ ನಿರಕ್ಷೆಯಲಿದ್ದಾರೆ ಅವರ ಅಭಿಮಾನಿಗಳು.

ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ನ ‘ದ್ವಿತ್ವ’ ಚಿತ್ರದ ಟೈಟಲ್ ಪೋಸ್ಟರ್ ಇತ್ತೀಚಿಗಷ್ಟೆ ಅನಾವರಣಗೊಂಡಿದ್ದು, ಪೋಸ್ಟರ್ ಕಾಪಿ ಮಾಡಲಾಗಿದೆ ಎನ್ನುವ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು ಪವನ್ ಕುಮಾರ್. ಇದು ಕಾಪಿ ಅಲ್ಲ ಡಿಸೈನ್ ಖರೀದಿ ಮಾಡಿ ಪೋಸ್ಟರ್ ಡಿಸೈನ್ ಮಾಡಲಾಗಿದೆ ಎಂದು ಈಗಾಗಲೇ ಸ್ವಷ್ಟಪಡಿಸಿದ್ದರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

error: Content is protected !!