ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಾಂಡ್ಲ ಪ್ರದೇಶ ಬೆಳೆದಷ್ಟು ರಕ್ಷಣೆಗೆ ಅನುಕೂಲವಾಗುತ್ತದೆ. ಯಾವುದೇ ಸೈಕ್ಲೋನ್ ಬರದ ಹಾಗೆ ರಕ್ಷಣೆಗೆ ಅನುಕೂಲವಾಗುತ್ತದೆ.
ಕುಂದಾಪುರದ ಪ್ರಸಿದ್ಧವಾದ ಕಾಣೆ ಮೀನು ಬ್ರೀಡಿಂಗ್ ಜಾಗಗಳಿದ್ದು ಅದಕ್ಕೂ ಅನುಕೂಲವಾಗುತ್ತದೆ. ಇಲ್ಲಿ ಇಕೋ ಟೂರಿಸಂ ಮಾಡಬೇಕು. ಅದರಿಂದ ಬರುವ ಆದಾಯವನ್ನು ಹಿನ್ನೀರು ಬಂದು ಸೇರುವ ಹಾಗೂ ಎಲ್ಲಿ ಅರಣ್ಯ ಬೆಳೆಸಿಲ್ಲ. ಆ ಪ್ರದೇಶದಲ್ಲಿ ಕಾಂಡ್ಲ ಅರಣ್ಯವನ್ನು ಬೆಳೆಸುವಂತಹ ಯೋಜನೆ ಸಿದ್ಧ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಎರಡು ದಿನಗಳ ಉಡುಪಿ ಜಿಲ್ಲಾ ಪ್ರವಾಸದಲ್ಲಿ ಇರುವ ಅವರು ಇಂದು ಕುಂದಾಪುರ ಚರ್ಚ್ ರೋಡ್ ನದಿ ತೀರದ ಕಾಂಡ್ಲಾ ವನ ವೀಕ್ಷಿಸಿ ಮಾತನಾಡಿದರು.
ಕರ್ನಾಟಕದ ವಿಶೇಷತೆ ಎಂಬಂತೆ ನಮಗೆ ವೆಸ್ಟರ್ನ್ ಕೋಸ್ಟ್ ಇದೆ. ವೆಸ್ಟರ್ನ್ ಘಾಟ್ ಇದೆ. ಈಸ್ಟರ್ನ್ ಘಾಟ್ ಇದೆ ಹಾಗೂ ವೆಸ್ಟರ್ನ್ ಕೋಸ್ಟಲ್ ಬೆಲ್ಟ್ ಇದೆ. ಕೋಸ್ಟಲ್ ಬೆಲ್ಟ್ ನಾದ್ಯಂತ ಕಾಂಡ್ಲಾ ಅರಣ್ಯ ಬೆಳೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಜಾಗವನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇಕೋ ಟೂರಿಸಂಗೆ ಅವಕಾಶ ಇದೆ. ಇಂಟೀರಿಯರ್ ಫಾರೆಸ್ಟ್, ಕೋರ್ ಏರಿಯಾಗಳಿಗೆ ಹೋಗಲು ಅವಕಾಶ ಇದೆ. ಕೋರ್ ಏರಿಯಾಗಳಲ್ಲಿ ಇಂದಿನ ಟೆಕ್ನಾಲಜಿಗಳನ್ನು ಬಳಸಿ, 360 ಡಿಗ್ರಿಯ ಕ್ಯಾಮೆರಾಗಳನ್ನು ಬಳಸಿ ವೀಡಿಯೋ ಮಾಡಿ ಅಲ್ಲಲ್ಲಿ ಇಕೋ ಟೂರಿಸಂ ಮೂಲಕ ಸೆಂಟರ್ ಗಳನ್ನು ಮಾಡಿ ಕೋರ್ ಏರಿಯಾಗಳು ಹೇಗಿವೆ ಎಂಬುದನ್ನು ತೋರಿಸುವ ಬಗೆಗೆ ಇಲಾಖೆಯಲ್ಲಿ ಚಿಂತನೆ ಇದ್ದು. ಈಗಾಗಲೇ ಬಿ ಆರ್ ಟಿ ಅಲ್ಲಿ ಆ ರೀತಿಯ ಕೆಲಸ ನಡೆಯುತ್ತಿದೆ. ಕೋಸ್ಟಲ್ ಬೆಲ್ಟ್ ನಲ್ಲೂ ಕೂಡ ಆ ರೀತಿಯ ರಮಣೀಯ ಜಾಗವನ್ನು ಅಧಿಕಾರಿಗಳು ತೋರಿಸಿದ್ದು, ಈ ರೀತಿ ವೀಡಿಯೋ ಮಾಡಿ ಪ್ರಚಾರ ಮಾಡಿದರೆ ಪ್ರವಾಸಿಗರು ಆಕರ್ಷಿತರಾಗುತ್ತಾರೆ ಮತ್ತು ಆದಾಯ ಬರುತ್ತದೆ. ಆ ಆದಾಯದಿಂದಲೇ ಕಾಂಡ್ಲಾ ಫಾರೆಸ್ಟ್ ಬೆಳೆಸುವ ಬಗ್ಗೆ ಸೂಚಿದ್ದೇನೆ ಎಂದರು.
ಗ್ರೀನ್ ಕವರ್ ಹೆಚ್ಚಿಸುವ ಗುರಿ :
ಹಿಂದೆ ಯಡಿಯೂರಪ್ಪ ಸರ್ಕಾರವಿದ್ದಾಗ ‘ಹಸಿರು ಕವಚ’ ಯೋಜನೆ ತಂದಿದ್ದರ ಪರಿಣಾಮವಾಗಿ ಕರ್ನಾಟಕದಲ್ಲಿ ಗ್ರೀನ್ ಕವರ್ 13% ಇದ್ದಿದ್ದು 23% ಕ್ಕೆ ತಲುಪಿದ್ದೇವೆ. ಮುಂದೆ 33% ಗೆ ತೆಗೆದುಕೊಂಡು ಹೋಗುವ ಗುರಿಯನ್ನು ನಾನಿಟ್ಟುಕೊಂಡಿದ್ದೇನೆ. ಒಂದೇ ದಿನ, ವರ್ಷದಲ್ಲಿ ಯೋಜನೆ ಫಲಿಸದು. ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಾದದ್ದು ಕಂಡಿದ್ದೇವೆ. ಕಾಂಡ್ಲಾ ಅರಣ್ಯದ ಮರಗಳಿಂದ ಸಹಜವಾಗಿಯೇ ಆಮ್ಲಜನಕ ಸಿಗುತ್ತದೆ. ಹಾಗಾಗಿ ಅದನ್ನು ಬೆಳೆಸುವ ಕೆಲಸ ಮಾಡಬೇಕು. ಗ್ರೀನ್ ಕವರ್ ಜಾಸ್ತಿಯಾಗುತ್ತದೆ. ರಿಸರ್ವ್ ಫಾರೆಸ್ಟ್, ಫಾರೆಸ್ಟ್ ಮತ್ತು ಕೋಸ್ಟಲ್ ಫಾರೆಸ್ಟ್ ಈ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಜನರೂ ಅದಕ್ಕೆ ಸಹಕಾರ ಕೊಟ್ಟರೆ ಗ್ರೀನ್ ಕವರ್ ಹೆಚ್ಚಾಗಲು ಸಾಧ್ಯ ಎಂದರು.
ಹೆಮ್ಮಾಡಿಯ ಕಾಂಡ್ಲಾ ಅರಣ್ಯ, ಕಡಲಾಮೆ ಪುನರ್ವಸತಿ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಕಸ್ತೂರಿ ರಂಗನ್ ಬಗ್ಗೆ ಯೋಚನೆ ಇಲ್ಲ ಎಂದು ಇದೇ ವೇಳೆ ಅವರು ಹೇಳಿದ ರು.

ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ,ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್,ಪುರಸಭೆ ಉಪಾಧ್ಯಕ್ಷ ಸಂದೀಪ್ ಕಾರ್ವಿ,ಪುರಸಭೆ ಸದಸ್ಯರುಗಳಾದ ಮೋಹನ್ ಶೆಣೈ, ಸಂತೋಷ್ ಶೆಟ್ಟಿ,ಶ್ವೇತಾ ಸಂತೋಷ್,ಬಿಜೆಪಿ ಮುಖಂಡರುಗಳಾದ ಸುರೇಶ್ ಶೆಟ್ಟಿ,ಸತೀಶ್ ಪೂಜಾರಿ ವಕ್ವಾಡಿ,ದಿವಾಕರ ಕಡ್ಗಿ,ಕೋಡಿ ಅಶೋಕ್ ಪೂಜಾರಿ,ಸುದೀರ್ ಕೆಎಸ್,ಅವಿನಾಶ್ ಉಳ್ತೂರು,ಸುರೇಂದ್ರ ಕಾಂಚನ್,ಪ್ರಕಾಶ್ ಕಾರ್ವಿ ಮೊದಲಾದವರು ಉಪಸ್ಥಿತರಿದ್ದರು.