ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸದ ಮೇಲೆ ಕೊರೊನಾ ತನ್ನ ಪರಿಣಾಮ ಬೀರಿದೆ. ಶ್ರೀಲಂಕಾ ತಂಡವು ಇಂಗ್ಲೆಂಡ್‌ನಿಂದ ಹಿಂದಿರುಗಿದ್ದಾಗ ಲಂಕಾ ಶಿಬಿರದಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಪ್ರವಾಸದ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿಯ ಪ್ರಾರಂಭವನ್ನು 5 ದಿನಗಳು ಕಾಲ ಮುಂದೂಡಲಾಗಿದೆ. ಈ ಮಾಹಿತಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೇ ಶಾ ನೀಡಿದ್ದಾರೆ.
ಲಂಕಾ ಬ್ಯಾಟಿಂಗ್ ತರಬೇತುದಾರ ಗ್ರಾಂಟ್ ಫ್ಲವರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಶ್ರೀಲಂಕಾ ತಂಡದ ಶಿಬಿರದಲ್ಲಿಯು ಕೂಡ ಕೊರೊನಾ ವೈರಸ್ ಕಂಡು ಬಂದಿರುವುದರಿಂದ ಸರಣಿಯನ್ನು 5 ದಿನಗಳವರೆಗೆ ವಿಸ್ತರಿಸಲಾಗಿದೆ.
ಹಳೆ ವೇಳಾಪಟ್ಟಿ ಪ್ರಕಾರ ಪಂದ್ಯಗಳನ್ನು ಈ ಮೊದಲು ಜುಲೈ 13, ಜುಲೈ 16 ಮತ್ತು ಜುಲೈ 18 ರಂದು ಆಡಲು ನಿರ್ಧರಿಸಲಾಗಿತ್ತಾದರೂ ಪಂದ್ಯಗಳನ್ನು ಜುಲೈ 18, 20 ಮತ್ತು 23 ರಂದು ಆಡಲಾಗುವುದು. ಜುಲೈ 21 ರಿಂದ 25 ರವರೆಗೆ ನಡೆಯಬೇಕಿದ್ದ ಟಿ 20 ಸರಣಿಯು ಜುಲೈ 25 ಮತ್ತು 29 ರ ನಡುವೆ ನಡೆಯಲಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಎಲ್ಲಾ ಪಂದ್ಯಗಳು ನಡೆಯಲಿವೆ.
