ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯದಾದ್ಯಂತ ಜುಲೈ 19 ಮತ್ತು 22 ರಂದು ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಕೊರೋನಾ ಭೀತಿಯ ನಡುವೆ ಈ ಬಾರಿ ಪರೀಕ್ಷೆ ನಡೆಯುತ್ತಿದೆ. ಬ್ರಹ್ಮಾವರ ತಾಲೂಕಿನಾದ್ಯಂತ ಪರೀಕ್ಷೆಗೆ ಸಿದ್ಧತೆಗಳು ನಡೆಯುತ್ತಿದೆ. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ .ಆರ್ .ಪ್ರಕಾಶ್ ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಪೂರ್ವ ಸಿದ್ಧತೆ ನಡೆಯುತ್ತಿದೆ.
ಒಟ್ಟು 14 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. 1468 ಹುಡುಗರು ಮತ್ತು 1391 ಹುಡುಗಿಯರು ಒಟ್ಟು 2859 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೊದಲ ದಿನ(ಜು.19) ಗಣಿತ , ಸಮಾಜ , ಸಮಾಜ ವಿಜ್ಞಾನ ಮತ್ತು 2 ನೇ ದಿನ(ಜು.22) ಕನ್ನಡ, ಹಿಂದಿ, ಇಂಗ್ಲೀಷ್ ಪರೀಕ್ಷೆ ನಡೆಯಲಿದೆ.
ಒಟ್ಟು 472 ಸಿಬ್ಬಂದಿಗಳು ಕಾರ್ಯ ನಿರ್ವಹಣೆ :
ಪ್ರತೀ ಕೇಂದ್ರಕ್ಕೆ 4 ಸ್ಕೌಟ್ , ಓರ್ವ ದೈಹಿಕ ಶಿಕ್ಷಕರು, ಓರ್ವ ಆರೋಗ್ಯ, ಓರ್ವ ಆಶಾ ಕಾರ್ಯಕರ್ತೆಯರು ಓರ್ವ ಮೊಬೈಲ್ ಸ್ವಾಧಿನಾಧಿಕಾರಿ, ಓರ್ವ ಪೊಲೀಸ್ ಒಟ್ಟು 472 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.
ಸೋಮವಾರ ಬೆಳಿಗ್ಗೆ 8-30ಕ್ಕೆ ಉಡುಪಿಯಿಂದ ಎಸ್ಸ್ಕಾಡ್ ಬೆಂಬಲದ ಪೊಲೀಸ್ ವಾಹನದಲ್ಲಿ ಪ್ರಶ್ನೆ ಪತ್ರಿಕೆಯನ್ನು 7 ವಾಹನದಲ್ಲಿ 2 ಪರೀಕ್ಷಾ ಕೇಂದ್ರದಂತೆ 1 ಪೆರ್ಡೂರು, ಮಣಿಪಾಲ, 2 ಮೌಂಟ್ ರೊಸರಿ l, ಕೆಮ್ಮಣು, 3 ಮಿಲಾಗ್ರೀಸ್ ಬ್ರಹ್ಮಾವರ ಬೋರ್ಡ ಹೈಸ್ಕೂಲ್, 4 ನಿರ್ಮಲ, ಎಸ್. ಎಂ. ಎಸ್, 5 ಬಾರಕೂರು, ಆವರ್ಸೆ , 6 ಮಂದಾರ್ತಿ , ಕೊಕ್ಕರ್ಣೆ, 7 ಕೋಟ ವಿವೇಕ ಗರ್ಲ್ಸ್ ಮತ್ತು ಬಾಯ್ಸ್ ಶಾಲೆಗಳಿಗೆ ತಲುಪಿಸಿ 10-30 ಪರೀಕ್ಷೆ ಆರಂಭಗೊಳ್ಳುತ್ತದೆ.
ಸಂಜೆ ಪುನ: ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ನೋಡಲ್ ಅಧಿಕಾರಿ ರಾಘವ ಶೆಟ್ಟಿ ತಿಳಿಸಿದ್ದಾರೆ.
ಕೊರೋನಾ ಪಾಸಿಟಿವ್ ಇರುವವರಿಗೆ ಪ್ರತ್ಯೇಕ ವ್ಯವಸ್ಥೆ :
ಪರೀಕ್ಷೆಗೆ ಕರ್ಜೆ ಮತ್ತು ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಓರ್ವ ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿ ಪಾಸಿಟಿವ್ ಇದ್ದ ಕಾರಣ ಅವರಿಗೆ ಪ್ರತ್ಯೇಕ ಪರೀಕ್ಷಾ ವ್ಯವಸ್ಥೆ ಮಾಡಲಾಗಿದೆ.