ಉಡುಪಿ : ಖ್ಯಾತ ರಂಗಕರ್ಮಿ, ಲೇಖಕ , ಉಪನ್ಯಾಸಕ ಉದ್ಯಾವರ ಮಾಧವ ಆಚಾರ್ಯ(79) ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1941 ಮಾರ್ಚ್ 25 ರಂದು ಜನಿಸಿದ ಮಾಧವ ಆಚಾರ್ಯ ರವರು ಉಡುಪಿಯ ಕಲ್ಯಾಣಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕುಂದಾಪುರ ಭಂಡಾರ್ಕರ್ಸ್ ಕಾಲೇಜು, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಮಾಧವ ಆಚಾರ್ಯರ ಕೊಡುಗೆ :
ಬಾಗಿದ ಮರ, ಭಾಗದೊಡ್ಡಮ್ಮನ ಕಥೆ, ಸೀಳು ಬಿದಿರಿನ ಸಿಳ್ಳು, ಬೆಳಕಿನೆಡೆಗೆ (ಕಥಾ ಸಂಕಲನಗಳು), ರಂಗಸ್ಥಳದ ಕನವರಿಕೆಗಳು, ಕೃಷ್ಣನ ಸೋಲು, ಹೂ ಮಿಡಿ ಹಾಡು(ಕವನಸಂಕಲನ), ಗೋಡೆ, ರಾಧೆ ಎಂಬ ಗಾಥೆ, ಕೃಷ್ಣನ ಸೋಲು, ರಾಣಿ ಅಬ್ಬಕ್ಕ ದೇವಿ(ನಾಟಕಗಳು) ಇತ್ಯಾದಿ ಮಾಧವ ಆಚಾರ್ಯರ ಕೃತಿಗಳು.
Advertisement. Scroll to continue reading.
In this article:death news, Diksoochi news, karavali, Udupi, Udyavaramadhavaacharya
Click to comment