ವರದಿ : ದಿನೇಶ್ ರಾಯಪ್ಪನಮಠ
ಕೋಟ:ಕೋಟತಟ್ಟು ಗ್ರಾಮಪಂಚಾಯತ್ ನ ಪಡುಕರೆ ಯಿಂದ ಕೋಡಿ ಕನ್ಯಾಣದವೆರೆಗಿನ ಕರಾವಳಿ ರಸ್ತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಫಾರಸ್ಸಿನ ಮೇರೆಗೆ ಆಗಿನ ಮೀನುಗಾರಿಕಾ ಸಚಿವ ಪ್ರಸ್ತುವ ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಮಾರು 7 ಕೋಟಿ ರೂ ಬಿಡುಗಡೆಗೊಳಿಸಿದ್ದು ಸುಮಾರು 5 ಕಿಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಇದೀಗ ಪೂರ್ಣಗೊಂಡಿದೆ. ಮಂಗಳವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಪಡುಕರೆಯಿಂದ ಕೋಡಿ ಕನ್ಯಾಣದವರೆಗೆ ಪಾದಯಾತ್ರೆಮೂಲಕ ಸಂಚರಿಸಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಆಯಾ ಭಾಗಗಳಲ್ಲಿ ಅಲ್ಲಿನ ಸ್ಥಳೀಯರು ಸಚಿವರಿಗೆ ಪುಷ್ಭಗುಚ್ಛ ನೀಡಿ ಹಾರಹಾಕಿ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ರಸ್ತೆಕಾಮಗಾರಿ ಬಗ್ಗೆ ವ್ಯಾಪಕ ಪ್ರಶಂಸೆ :
ಸುಮಾರು ೫ಕಿಮೀ ದೂರ ೬ಮೀಟರ್ ವಿಸ್ತೀರ್ಣದ ರಸ್ತೆ ಕಾಮಗಾರಿ ನಿರ್ಮಿತಿಕೇಂದ್ರದ ವತಿಯಿಂದ ನಡೆದರೂ ಸ್ಥಳೀಯ ಮುಖಂಡ ಐರೋಡಿ ವಿಠ್ಠಲ್ ಪೂಜಾರಿಯವರ ವಿಶೇಷ ಕಾಳಜಿ ಮೂಲಕ ರಸ್ತೆಕಾಮಗಾರಿಯ ಯಶಸ್ವಿಯಾಗಿ ಪೂರೈಸಿ ಹೆಗ್ಗಳಿಕೆ ಇವರದ್ದಾಗಿದೆ ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಇಷ್ಟು ದೊಡ್ಡ ಕಾಮಗಾರಿಯನ್ನು ತನ್ನ ವಿಶೇಷ ಮುತುವರ್ಜಿಯಲ್ಲಿ ನಡೆಸಿಕೊಟ್ಟ ಬಗ್ಗೆ ಕೋಡಿ ಚಂದ್ರಶೇಖರ್ ನಾವಡ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಅಶ್ವಿನಿ ದಿನೇಶ್, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸದಸ್ಯೆ ರೇಖಾ ಕೇಶವ ಕರ್ಕೇರ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ ಮೆಂಡನ್, ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಪ್ರಕಾಶ್ ಹಂದಟ್ಟು ಸತೀಶ್ ಕುಂದರ್, ಪೂಜಾ ಪೂಜಾರಿ ಹಂದಟ್ಟು,ವಿದ್ಯಾ ಸಾಲಿಯಾನ್, ಸಾಹೀರಾಬಾನು, ರಾಬರ್ಟ್ ನಾಯ್ಕ್,ಜ್ಯೋತಿ,ಸೀತಾ,ಪ್ರಮೋದ್ ಹಂದೆ, ಬೈಂದೂರು ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಡುಪಿಯ ಎ.ಪಿ ಎಮ್ ಸಿ ಉಪಾಧ್ಯಕ್ಷ ಕೃಷ್ಣ ಪೂಜಾರಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಕೋಟತಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ರಘು ತಿಂಗಳಾಯ, ಬಿಜೆಪಿ ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಸ್ಥಳೀಯ ಮುಖಂಡರಾದ ಕೇಶವ ಕರ್ಕೇರ, ಶಿವಮೂರ್ತಿ ಕೆ,ಶ್ರೀನಿವಾಸ್ ಪೂಜಾರಿ, ನಾಗೇಶ್ ಪೂಜಾರಿ, ಸತೀಶ ತೋಳಾರ್, ರಾಮಬಂಗೇರ, ಸುರೇಂದ್ರ ಕೋಡಿ, ಜಗನಾಥ್ ಅಮೀನ್, ಉದಯ್ ತಿಂಗಳಾಯ, ಚಂದ್ರ ಪುತ್ರನ್, ಉದಯ್ ತಿಂಗಳಾಯ ಪಡುಕರೆ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ, ಕೋಟ ಗ್ರಾಮಪಂಚಾಯತ್ ಸದಸ್ಯರಾದ ಸಂತೋಷ್ ಪ್ರಭು ,ಚಂದ್ರ ಪೂಜಾರಿ, ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.