Connect with us

Hi, what are you looking for?

Diksoochi News

ರಾಷ್ಟ್ರೀಯ

ಚೆನ್ನೈ: ಕಟ್ಟಡವೊಂದರಲ್ಲಿ ಅಗ್ನಿ ಅವಘಡ; 38 ಮಂದಿ ಪಾರು

0

ಚೆನ್ನೈ: ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿರುವ ಘಟನೆ ಅಣ್ಣಾಸಲೈನಲ್ಲಿ ನಡೆದಿದೆ. ಅಣ್ಣಾ ಸಲೈನಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಬಿದ್ದಿದ್ದು ಕಟ್ಟಡದೊಳಗೆ ಸಿಕ್ಕಿಬಿದ್ದ 38 ಜನರನ್ನು ಅಗ್ನಿಶಾಮಕ ಇಲಾಖೆ ಸ್ಥಳಾಂತರಿಸಿದೆ. ಟ್ರಿಪ್ಲಿಕೇನ್, ಮದ್ರಾಸ್ ಹೈಕೋರ್ಟ್, ಎಗ್ಮೋರ್, ಅನ್ನಾ ಸ್ಕ್ವೇರ್, ಮತ್ತು ಟೇನಾಂಪೆಟ್ನ ಅಗ್ನಿಶಾಮಕ ಸಿಬ್ಬಂದಿಗಳ ಸಮಯೋಚಿತ ಕ್ರಮದಿಂದ ಹಲವಾರು ಜನರ ಜೀವಗಳನ್ನು ಉಳಿಸಲು ಸಹಾಯಕವಾಯಿತು.

ಕಟ್ಟಡದ ಮೂರನೇ ಮಹಡಿಯಿಂದ ಸ್ಥಳಾಂತರಿಸಲ್ಪಟ್ಟ ಮೂವತ್ತೆಂಟು ಜನರಲ್ಲಿ, ಮಗು ಸೇರಿದಂತೆ ಎಂಟು ಜನರನ್ನು ಸ್ಕೈ ಲಿಫ್ಟ್ ಬಳಸಿ ಸ್ಥಳದಿಂದ ರಕ್ಷಿಸಲಾಗಿದೆ. 12 ಮಹಿಳೆಯರು ಸೇರಿದಂತೆ ಉಳಿದ 30 ಮಂದಿಯನ್ನು ಕಟ್ಟಡದ ಉತ್ತರ ಭಾಗದಲ್ಲಿ ಬಾಗಿಲು ತೆರೆದು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಅನ್ನಾ ಸಲೈ ಚೆನ್ನೈನ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿರುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರೂ ಕೂಡ ಸಹಕರಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!