ರಾಜ್ಯದಲ್ಲಿ ಕೊರೋನಾ ಪ್ರಕರಣವು ದಿನದಿಂದ ದಿನೇ ಇಳಿಮುಖ ಕಾಣುತ್ತಿದ್ದು. ಈಗ ಸರ್ಕಾರವು ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ಅನ್ ಲಾಕ್ 4.0 ಮಾರ್ಗಸೂಚಿಯನ್ನೂ ಬಿಡುಗಡೆ ಗೊಳಿಸಿದ್ದು, ಅನೇಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದೀಗ ಮುಂದುವರೆದು ಅನ್ ಲಾಕ್ 4.0 ಮಾರ್ಗಸೂಚಿಯಂತೆ ನಾಳೆಯಿಂದ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳು ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗಳನ್ನು ತೆರೆಯುವಂತೆ ಅನುಮತಿ ನೀಡಿದೆ.
ಈ ಕುರಿತಂತೆ ರಾಜ್ಯ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಅಧಿಕೃತ ಸೂಚನೆ ಹೊರಡಿಸಿದ್ದಾರೆ.
ಮುಂಜಾಗ್ರತಾ ಕ್ರಮಗಳ ಮಾಸ್ಕ್, ಸಾಮಾಜಿಕ ಅಂತರದಂತಹ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಾತ್ರೆ, ದೇವಸ್ಥಾನಗಳ ಆಚರಣೆ ಸೇರಿದಂತೆ ಇತರೆ ಚಟುವಟಿಕೆ ನಿರ್ಬಂಧ ಹೇರಲಾಗಿದೆ.
ವಾಟರ್ ಸ್ಪೋರ್ಟ್, ಜಲ ಕ್ರೀಡೆಗಳಿಗೆ ಸಂಬಂಧಿಸಿದಂತ ಅಡ್ವೆಂಚರ್ ಚಟುವಟಿಕೆಗಳಿಗೆ ನಿರ್ಬಂಧಿಸಲಾಗಿದೆ.
Advertisement. Scroll to continue reading.