Connect with us

Hi, what are you looking for?

Diksoochi News

ಸಿನಿಮಾ

RRR ಚಿತ್ರದ ಮೊದಲ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್

0

ಬಹುನಿರೀಕ್ಷಿತ ಟಾಲಿವುಡ್ ನ ‘ಆರ್ ಆರ್ ಆರ್’ ಸಿನಿಮಾದ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ.

ಸಿನೆಮಾದ ಮೊದಲ ಹಾಡು ಆಗಸ್ಟ್ 1 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ತಂಡ ತಿಳಿಸಿದೆ. ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ದೋಸ್ತಿಯ ಕುರಿತು ಹಾಡು ಎಂದು ಬಹಿರಂಗಗೊಳಿಸಿದೆ.
ಇತ್ತೀಚಿಗೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಬೈಕ್ ರೈಡ್ ಹೊರಟಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್ ಇಬ್ಬರ ಸ್ನೇಹ ಬಾಂಧವ್ಯವನ್ನು ತೋರಿಸುತ್ತಿತ್ತು. ಇದೀಗ ದೋಸ್ತಿ ಹಾಡು ಬಿಡುಗಡೆಯಾಗುತ್ತಿದ್ದು ಕುತೂಹಲ ಹೆಚ್ಚಿಸಿದೆ.

ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಈ ಸಿನಿಮಾಗೆ ಸಂಗೀತ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಹಾಡಿಗೆ ಸಿರಿವೆನ್ನೆಲಾ ಸೀತರಾಮ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ವೇದಲ ಹೇಮಚಂದ್ರ ಧ್ವನಿ ನೀಡಿದ್ದಾರೆ.

Advertisement. Scroll to continue reading.

ಅಕ್ಟೋಬರ್ 13 ರಂದು ಚಿತ್ರ ಬೆಳ್ಳಿ ಪರದೆ ಮೇಲೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!