ವರದಿ : ಬಿ. ಎಸ್. ಆಚಾರ್ಯ
ಬ್ರಹ್ಮಾವರ: ಕರ್ನಾಟಕ ರಾಜ್ಯದ ಎಲ್ಲಾ ತಾಲೂಕುಕೇಂದ್ರಗಳ ಮೂಲಕ ಕಾಲುನಡಿಗೆಯಲ್ಲಿ ಸಂಚಾರಮಾಡಿ ಜನರಲ್ಲಿ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸುವ ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್. ಗುರುವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಸಾಲಿಗ್ರಾಮದಿಂದ ಹೊರಟು ಬ್ರಹ್ಮಾವರಕ್ಕೆ ಆಗಮಿಸಿದರು.
ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ ಇಲ್ಲಿನ ಜನರ ಪರವಾಗಿ ಯುವಕರು ಅವರನ್ನು ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.
2020 ರಂದು ನವೆಂಬರ್ 1ರಂದು ಬೀದರ್ ಜಿಲ್ಲೆಯ ಗಡಿಗ್ರಾಮದಿಂದ ಪಾದಯಾತ್ರೆಯಲ್ಲಿ ಹೊರಟು ಪ್ರತಿ ದಿನ 30 ರಿಂದ 40 ಕಿಮಿ ಕಾಲ್ನಡಿಗೆಯಲ್ಲಿ ಸಾಗುವ ಇವರು ನಿರಂತರವಾಗಿ ಈತನಕ 271 ದಿನದಲ್ಲಿ 8300 ಕಿಮಿ ನಡೆದು ಒಟ್ಟು 430 ದಿನದಲ್ಲಿ 12000 ನಡಿಗೆಯಲ್ಲಿ 300 ಕಾಲೇಜು 300 ಮಠಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಮತ್ತು ಪ್ರಬುದ್ಧ ಸಮಾಜವನ್ನು ನಿರ್ಮಾಣ ಮಾಡುವ ಕುರಿತು ಜಾಗೃತಿಕಾರ್ಯಕ್ರಮ ನಡೆಸಿ ಡಿಸೆಂಬರ್ ತಿಂಗಳಲ್ಲಿ ಇವರ ಜಾಗೃತಿ ಕಾರ್ಯಕ್ರಮ ಮುಗಿಸಲಿದ್ದಾರೆ.
ಮಾರ್ಗ ಮಧ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ, ಯುವಕ ಯುವತಿ ಮಂಡಲಗಳಲ್ಲಿ, ಸಂಘ ಸಂಸ್ಥೆಗಳ ಆಶ್ರಯದಲ್ಲಿ, ಮನೆಯಂಗಳಗಳಲ್ಲಿ ನೂರಾರು ಭಾಷಣ, ಉಪನ್ಯಾಸಗಳನ್ನು ಕೂಡಾ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಿಂದ ಹೊರಡುವಾಗ ಇಲ್ಲಿನ ಎಸ್ ಎಂ ಎಸ್ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಇವರೊಂದಿಗೆ ಕೆಲವು ದೂರ ಹೆಜ್ಜೆ ಹಾಕಿದರು.
ಬಳಿಕ ಸಂತೆಕಟ್ಟೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಸ್ಟುಡೆಂಟ್ ಮತ್ತು ಪ್ರೊಫೆಸರ್ಸ್ ಜೊತೆಗೆ ನಡೆಯುವ ಸಂವಾದಕ್ಕೆ ಬರಮಾಡಿಕೊಂಡ ಪ್ರಿನ್ಸಿಪಾಲ್ ವಿನ್ಸೆಂಟ್ ಆಳ್ವ , ವಿವೇಕಾನಂದರ ಜೊತೆ ಯಾಗಿ ನಡೆದುಕೊಂಡು ಹೋದರು.
ಈ ಹಿಂದೆ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದ ವಿವೇಕಾನಂದರು ವಿವಾಹಿತರಾಗಿ ಪತ್ನಿ ಮತ್ತು ಓರ್ವ ಮಗನೊಂದಿಗೆ ಇರುವ ಇವರು ಮುಂದಿನ ಸ್ವಸ್ಥ ಸಮಾಜ ನಿರ್ಮಾಣದ ಹಿತದೃಷ್ಟಿಯಿಂದ ಈ ನಡಿಗೆಯನ್ನು ಹಮ್ಮಿಕೊಂಡಿದ್ದಾರೆ.