ವರದಿ:ದಿನೇಶ್ ರಾಯಪ್ಪನ ಮಠ
ಕುಂದಾಪುರ:ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡೆಟ್ಟು ಪರಿಸರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ್ ಕಂಬಗಳು ಸರಿಸುಮಾರು 40 ವರ್ಷ ಹಿಂದಿನದ್ದಾಗಿದ್ದು ಕೃಷಿ ಗದ್ದೆಗಳಿಗೆ ವಿದ್ಯುತ್ ತಂತಿಗಳು ಜೊತು ಬಿದ್ದಿದ್ದು ಕೃಷಿ ಕೆಲಸಗಳಿಗೆ ತೊಡಕುಂಟಾಗುತ್ತಿದ್ದು ಗದ್ದೆಗೆ ಕೃಷಿಗೆ ಸಂಭಂದ ಪಟ್ಟ ಯಂತ್ರಗಳನ್ನು ಉಪಯೋಗಿಸದ ಪರಿಸ್ಥಿತಿಯೆದುರಾಗಿದೆ.
ಇನ್ನು ರಸ್ತೆ ಹಾಗೂ ಮನೆಗಳಿರುವ ಪ್ರದೇಶದಲ್ಲಿ ವಿದ್ಯುತ್ ತಂತಿ ಜೊತುಬಿದ್ದಿದ್ದು ಆಗಾಗೆ ತಂತಿ ಕಳಚಿ ಬಿಳುತಿದ್ದು ಜನರು ಆತಂಕದಿಂದ ಜೀವನ ನಡೆಸುವುದು ಒಂದೆಡೆಯಾದರೆ ಜಾನುವಾರುಗಳನ್ನು ಮೆಯಲು ಹೊರಗಡೆ ಬಿಡದ ಪರಿಸ್ಥಿತಿಯೆದುರಾಗಿದೆ .ಸರಿಯಾದಾ ಸಮಯಕ್ಕೆ ಹಾಲಾಡಿ ಮೆಸ್ಕಾಂ ಲೈನ್ ಮೆನ್ ಗಳು ಸಹಕರಿಸದೆ ಮೂರ್ನಾಲ್ಕು ದಿನಗಳ ಕಾಲ ವಿದ್ಯುತ್ ಇಲ್ಲದೆ ಜನ ಪರದಾಡಿದ್ದುಂಟು,ವಿಧ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗಳಿಗು ಇದರಿಂದ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳಿಗೆ ಕಳೆದ ಮೂರು ವರ್ಷಗಳಿಂದಲು ಮನವಿಮಾಡಿಕೊಂಡರು,ಕಛೆರಿಗಳಿಗಲಿದಾಡಿದರು ಅಧಿಕಾರಿಗಳಿಂದ ಹಾರಿಕೆಯ ಉತ್ತರ ಬರುತ್ತಿದೆಯೊ ಹೊರತು ಯಾವುದೇ ಪ್ರಯೋಜನವಾಗಿಲ್ಲ.ಇನ್ನು ಹತ್ತುದಿಗಳವೊಳಗೆ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳದಿದ್ದಲ್ಲಿ ಬಿದ್ಕಲ್ ಕಟ್ಟೆ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಎಚ್ಚರಿಕೆಯನ್ನು ಸ್ಥಳಿಯರು ನೀಡಿದ್ದಾರೆ ಹಾಗೂ ಯಾವುದೆ ಆಘಾತವಾದರು ಅದಕ್ಕೆ ಮೆಸ್ಕಾಂ ಅಧಿಕಾರಿಗಳೆ ಹೊಣೆಯೆಂದಿದ್ದಾರೆ.
ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಉದಯ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿಮಾಡಿಕೊಂಡರು ಕೂಡ ನಮ್ಮ ಸಮಸ್ಯೆ ಸಮಸ್ಯೆಯಾಗಿಯೆ ಉಳಿದಿದೆ ಹೊರತು ಯಾವುದೇ ಅಧಿಕಾರಿ ಸ್ಥಳಕ್ಕು ಭೇಟಿನೀಡಿಲ್ಲ.ಕೃಷಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಜನರಿಗೆ ಇದರಿಂದ ದೊಡ್ಡ ಹೊಡೆತ ಉಂಟಾಗಿದೆ ಇನ್ನಾದರು ಅಧಿಕಾರಿಗಳು ಸಮಸ್ಯೆಯನ್ನು ನಿವಾರಿಸ ಬೇಕಾಗಿದೆ ಎಂದರು.
ಸ್ಥಳಿಯ ನಿವಾಸಿ ಸಂಜೀವ ಮಾತನಾಡಿ ಕೆಲವೊಮ್ಮೆ ವಿದ್ಯುತ್ ವ್ಯತ್ಯಯವಾದರೆ ಮೂರ್ನಾಲ್ಕುದಿನಗಳಕಾಲ ಬಾರದೆ ಇದ್ದದು ಉಂಟು ಸಂಭಂದ ಪಟ್ಟವರಿಗೆ ಈ ಬಗ್ಗೆ ತಿಳಿಸಿದರೆ ಅವರ ಸಮಸ್ಯೆಯನ್ನೆ ನಮ್ಮಲಿ ಹೇಳಿಕೊಳ್ಳುತ್ತಾರೆಯೆ ಹೊರತು ನಮ್ಮ ಸಮಸ್ಯೆ ಅವರಿಗೆ ಸಮಸ್ಯೆಯಾಗಿಯೆ ಕಾಣುದಿಲ್ಲ ಒಂದುಕಡೆ ವಿದ್ಯುತ್ ತಂತಿ ಜೊತಾಡಿ ಕೃಷಿಕರಿಗೆ ಸಮಸ್ಯೆ ಒಂದೆಡೆಯಾದರೆ ಪದೇ ಪದೇ ಕರೆಂಟ್ ತೆಗೆಯುದರಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಗಳಿಗು ಸಮಸ್ಯೆಯಾಗಿದೆ ಇನ್ನು ಹತ್ತುದಿನಗಳ ಒಳಗಾಗಿ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನದಿನಗಳಲ್ಲಿ ಕಛೇರಿಯೆದುರುಗಡೆ ಪ್ರತಿಭಟನೆ ಮಾಡುದಾಗಿ ಎಚ್ಚರಿಸಿದ್ದಾರೆ.