Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ: ಹಣಕಾಸು ವಿಚಾರ ಕಾಳಾವರದಲ್ಲಿ ಫೈನಾನ್ಸಿಯರ್ ಕೊಲೆ.

0

ವರದಿ:ದಿನೇಶ್ ರಾಯಪ್ಪನ ಮಠ

ಕುಂದಾಪುರ: ಹಣಕಾಸು ವಿಚಾರಕ್ಕೆ ಸಂಭಂದಿಸಿ ವ್ಯಕ್ತಿಯೊರ್ವನನ್ನು ಕೊಲೆ ಮಾಡಿದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಳಾವರದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.

Advertisement. Scroll to continue reading.

ಯಡಾಡಿ – ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ (33) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.

ಅಜೇಂದ್ರ ಶೆಟ್ಟಿ ಹಾಗೂ ಅನೂಪ್ ಸೇರಿಕೊಂಡು ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ ನಲ್ಲಿ ಕಳೆದ ನಾಲ್ಕು ವರ್ಷ ಗಳಿಂದ ಡ್ರೀಮ್ ಫೈನಾನ್ಸ್‌ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಶುಕ್ರವಾರ ರಾತ್ರಿ ಅಜೇಂದ್ರನು ಮನೆಗೆ ಬಾರದ ಕಾರಣ ಆತನಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದೆ ಇರುವುದರಿಂದ ಸ್ನೇಹಿತರಿಗೆ ಕರೆ ಮಾಡಿ ಮನೆಯವರು ಮಾಹಿತಿ ನೀಡುತ್ತಾರೆ.

ಸ್ನೇಹಿತರು ರಾತ್ರಿ ಕಾಳಾವರಕ್ಕೆ ಬಂದು ಫೈನಾನ್ಸ್‌ ನಲ್ಲಿ ನೋಡುವಾಗ ಫೈನಾನ್ಸ್‌ ನ ರೂಮಿನಲ್ಲಿ ಅಜೇಂದ್ರ ಶೆಟ್ಟಿಯು ಕುಳಿತಲ್ಲಿಯೇ ವಾಲಿಕೊಂಡು ಬಿದ್ದಿದ್ದು, ಆತನ ಕುತ್ತಿಗೆ ಬಳಿ ಕಡಿದ ಗಾಯವಾಗಿ ರಕ್ತ ಹರಿಯುತ್ತಿತ್ತು. ಕೂಡಲೇ ಸ್ನೇಹಿತರು ಕಾರಿನಲ್ಲಿ ಅಜೇಂದ್ರನನ್ನು ಕೋಟೇಶ್ವರ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದಾರೆ,ಅಜೇಂದ್ರನನ್ನು ಪರೀಕ್ಷಿಸಿ ಮೃತಪಟ್ಟಿರುದನ್ನು ತಿಳಿಸುತ್ತಾರೆ.

ಕೊಲೆಗೆ ನಿಖರ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!