Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬಾರಕೂರು ಶಾಖೆಯಿಂದ ಜನ ಸಂಪರ್ಕ ಸಭೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬಾರಕೂರು ಶಾಖೆ ಮತ್ತು ನಬಾರ್ಡ ಸಹಯೋಗದೊಂದಿಗೆ ಜನ ಸಂಪರ್ಕ ಸಭೆ ಮತ್ತು ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಬಾರಕೂರು ಶಾಖೆಯಲ್ಲಿ ಜರುಗಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಮಹಾಪ್ರಭಂದಕ ಕರುಣಾಕರ ದಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವರದರಾಜ್.ಎಸ್.ಶೆಟ್ಟಿ , ಆರ್ಥಿಕ ಸಾಕ್ಷರತೆ, ದೀರ್ಘಕಾಲದ ಬಂಡವಾಳ ಹೂಡಿಕೆ ಮತ್ತು ಹೊಸ ಹೊಸ ಆರ್ಥಿಕ ಸಂಸ್ಥೆಯಲ್ಲಿ ಅಧಿಕ ಬಡ್ಡಿಯ ಆಮಿಷದಿಂದ ಠೇವಣಿ ಇರಿಸುವಾಗ ಜಾಗ್ರತೆ ವಹಿಸಬೇಕಾದ ಕ್ರಮ, ಉಳಿತಾಯ ಖಾತೆ, ವಿಮೆ, ಸ್ವಸಾಹಾಯ ಸಂಘದ ವಿವಿಧ ಸೌಲಭ್ಯದ ಕುರಿತು ಮಾಹಿತಿ ನೀಡಿದರು.


ಬಾರಕೂರು ವ್ಯ.ಸೇ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಉಪಸ್ಥಿತರಿದ್ದರು. ಬಾರಕೂರು ಎಸ್. ಸಿ .ಡಿ.ಸಿ. ಸಿ ಬ್ಯಾಂಕ್ ಪ್ರಭಾರ ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ ಸ್ವಾಗತಿಸಿ, ಪ್ರೇರಕಿ ವಿಶಾಲಾಕ್ಷಿ ವಂದಿಸಿದರು. ಸ್ವ.ಸಾಹಾಯ ಸಂಘಗಳ ಪ್ರೇರಕ ಪ್ರಶಾಂತ ನಿರೂಪಿಸಿದರು. ಸಹಕಾರಿ ಬ್ಯಾಂಕಿನ ಅನೇಕ ಗ್ರಾಹಕರು ಭಾಗವಹಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಲಕ್ನೋ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕ ಹಾಗೂ ಕ್ಷೇತ್ರದ ಅಭ್ಯರ್ಥಿ ರಾಹುಲ್‌ ಗಾಂಧಿ ಭೇಟಿ ಬಳಿಕ ಕ್ಷೌರದ ಅಂಗಡಿಯ ಲಕ್‌ ಬದಲಾಗಿದೆ. ರಾಜಕೀಯ ಜನಪ್ರಿಯ ನಾಯಕನ ಭೇಟಿ ನಂತರ ಅಂಗಡಿಗೆ ಭೇಟಿ...

ಜ್ಯೋತಿಷ್ಯ

0 ದಿನಾಂಕ : ೧೭-೦೫-೨೪, ವಾರ : ಶುಕ್ರವಾರ ನಿಮ್ಮ ಕೆಲಸವನ್ನು ಇತರರಿಗೆ ಬಿಟ್ಟುಕೊಡಬೇಡಿ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಹೋದ್ಯೋಗಿಗಳು ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕೆಲವು...

ಕರಾವಳಿ

0 ಉಡುಪಿ: ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್), ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡಕ ಸಹಯೋಗದಲ್ಲಿ ಮೇ 18ರಂದು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎಂಬ ಬಗ್ಗೆ ವಿಚಾರ...

ರಾಜ್ಯ

0 ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮನೆಯೊಳಗೆ ನುಗ್ಗಿ ಮಲಗಿದ್ದಲ್ಲೇ ಯುವತಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು...

ಅರೆ ಹೌದಾ!

0 ತಿರುವನಂತಪುರಂ: ಆರು ಬೆರಳುಗಳಿರುವ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿ ವೈದ್ಯರು ಎಡವಟ್ಟು ಮಾಡಿರುವ ಪ್ರಕರಣವೊಂದು ಕೇರಳದ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ...

error: Content is protected !!