Connect with us

Hi, what are you looking for?

Diksoochi News

ಇತರೆ

ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

0

ನ್ಯೂಯಾರ್ಕ್‌: ಸಲಿಂಗ ಜೋಡಿಯಾಗಿ ಮದುವೆಯಾಗಲು ಹೊರಟು ಭಾರೀ ಸುದ್ದಿಯಾಗಿದ್ದ ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯುಯೆನ್ಸರ್‌ ಗಳಾದ ಭಾರತ ಮೂಲದ ಅಂಜಲಿ ಚಕ್ರ ಮತ್ತು ಪಾಕಿಸ್ತಾನ ಮೂಲದ ಸೂಫಿ ಮಲಿಕ್‌ ಅವರ ಮದುವೆ ಮುರಿದುಬಿದ್ದಿದೆ!

2019ರಲ್ಲಿ ಸಲಿಂಗ ಸಂಬಂಧದಿಂದಾಗಿ ಇವರಿಬ್ಬರು ಸುದ್ದಿಯಲ್ಲಿದ್ದರು. ಆದರೆ ಇಷ್ಟು ವರ್ಷಗಳ ಪರಸ್ಪರ ಪ್ರೇಮವು ಬ್ರೇಕ್‌ ಅಪ್‌ನಲ್ಲಿ ಅಂತ್ಯಗೊಂಡಿದೆ.

ಸೂಫಿ ಮಲಿಕ್‌ ನನಗೆ ದ್ರೋಹ ಬಗೆದಳು. ಹೀಗಾಗಿ ನಮ್ಮ ಮದುವೆಯನ್ನು ರದ್ದು ಮಾಡುತ್ತಿದ್ದೇವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಂಜಲಿ ಚಕ್ರ ಬರೆದುಕೊಂಡಿದ್ದಾರೆ.

Advertisement. Scroll to continue reading.

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಅಂಜಲಿ, ಸೌತ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಈವೆಂಟ್‌ ಪ್ಲಾನರ್‌ ಆಗಿ ವೃತ್ತಿ ಮಾಡುತ್ತಿದ್ದಾರೆ. ಜತೆಗೆ ಪ್ರವಾಸ, ಸೌಂದರ್ಯ, ಈವೆಂಟ್‌ ಪ್ಲಾನಿಂಗ್‌ ಕುರಿತು ಬ್ಲಾಗ್‌ ಬರೆಯುತ್ತಾರೆ.

ಮದುವೆಗೆ ಕೆಲವೇ ವಾರಗಳಿರುವಂತೆ ನಾನು ಅಂಜಲಿಗೆ ದ್ರೋಹವೆಸಗಿ, ಗುರುತರ ತಪ್ಪು ಮಾಡಿದ್ದೇನೆ. ನನ್ನ ತಿಳಿವಳಿಕೆ ಮೀರಿ ಅವಳಿಗೆ ತುಂಬ ನೋಯಿಸಿದ್ದೇನೆ ಎಂದು ಇನ್ಸ್‌ಸ್ಟಾದಲ್ಲಿ ಸೂಫಿ ಮಲಿಕ್‌ ಬರೆದುಕೊಂಡಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಲಕ್ನೋ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕ ಹಾಗೂ ಕ್ಷೇತ್ರದ ಅಭ್ಯರ್ಥಿ ರಾಹುಲ್‌ ಗಾಂಧಿ ಭೇಟಿ ಬಳಿಕ ಕ್ಷೌರದ ಅಂಗಡಿಯ ಲಕ್‌ ಬದಲಾಗಿದೆ. ರಾಜಕೀಯ ಜನಪ್ರಿಯ ನಾಯಕನ ಭೇಟಿ ನಂತರ ಅಂಗಡಿಗೆ ಭೇಟಿ...

ಜ್ಯೋತಿಷ್ಯ

0 ದಿನಾಂಕ : ೧೭-೦೫-೨೪, ವಾರ : ಶುಕ್ರವಾರ ನಿಮ್ಮ ಕೆಲಸವನ್ನು ಇತರರಿಗೆ ಬಿಟ್ಟುಕೊಡಬೇಡಿ. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸಹೋದ್ಯೋಗಿಗಳು ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕೆಲವು...

ಕರಾವಳಿ

0 ಉಡುಪಿ: ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್), ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡಕ ಸಹಯೋಗದಲ್ಲಿ ಮೇ 18ರಂದು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎಂಬ ಬಗ್ಗೆ ವಿಚಾರ...

ರಾಜ್ಯ

0 ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮನೆಯೊಳಗೆ ನುಗ್ಗಿ ಮಲಗಿದ್ದಲ್ಲೇ ಯುವತಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು...

ಅರೆ ಹೌದಾ!

0 ತಿರುವನಂತಪುರಂ: ಆರು ಬೆರಳುಗಳಿರುವ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿ ವೈದ್ಯರು ಎಡವಟ್ಟು ಮಾಡಿರುವ ಪ್ರಕರಣವೊಂದು ಕೇರಳದ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ...

error: Content is protected !!